logo

About Us

In the Budget speech of July, 2018 an announcement was made to launch an integrated Public Grievance Redressal System (iPGRS) for the Citizens to register their grievances.

The system has an exhaustive list of around 600 different schemes and services of various Government Departments and the probable grievances received from the public. Each of these grievances are mapped to specific Last Mile Functionaries (LMF) of the respective Department for that particular scheme/ service.

A provision has been created for the L1, L2 & L3 (level -1, Level-2 & Level-3) officers to examine the grievances of the citizens, listen to the citizens' problems and resolve their grievances in the most satisfactory manner as per the prevailing laws and rules, within the stipulated time.

The integrated Public Grievance Redressal System is available as a web portal, as a mobile application ( https://play.google.com/store/apps/details?id=com.csg.ipgrs ) and even where there is no internet connection, citizens can also call the Call Centre helpline 1902 and register complaint/grievance.

SMS are sent to the citizens to keep them informed about the status of the grievance redressal. Once the grievance is redressed, an "Action Taken Report" gets generated and it is made available to citizens in the portal and also feedback of the citizens is captured. If the citizens’ feedback is “not satisfactory”, the system automatically escalates the grievance to higher officer for review.

ನಮ್ಮ ಬಗ್ಗೆ

ಜುಲೈ 2018ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಸಾರ್ವಜನಿಕರು ತಮ್ಮ ದೂರುಗಳನ್ನು ದಾಖಲಿಸಲು ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಪ್ರಾರಂಭಿಸಲು ಘೋಷಿಸಲಾಗಿದೆ.

ಸರ್ಕಾರದ ಹಲವು ಇಲಾಖೆಗಳ 600 ಕ್ಕೂ ಹೆಚ್ಚಿನ ವಿವಿಧ ಯೋಜನೆಗಳು ಹಾಗೂ ಸೇವೆಗಳು ಮತ್ತು ಅದಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರಿಂದ ಬರಬಹುದಂತಹ ದೂರುಗಳನ್ನು ಯಾವ ಹಂತದಲ್ಲಿ ಇಲಾಖೆಯ ಅಧಿಕಾರಿಗಳು ನಿವಾರಣೆ ಮಾಡಬೇಕು ಎಂಬುದನ್ನು ಪರಿಶೀಲಿಸಿ  ಸಾರ್ವಜನಿಕರು ದಾಖಲಿಸಿದ ದೂರು / ಕುಂದುಕೊರತೆಗಳನ್ನು ನೇರವಾಗಿ ಅಯಾ ಇಲಾಖೆಗೆ ಸಂಬಂಧಿಸಿದ ಸೇವೆ / ಯೋಜನೆಯನ್ನು ನಿರ್ವಹಿಸುತ್ತಿರುವ ಕ್ಷೇತ್ರದ ಅಂತಿಮ ಹಂತದ ಅನುಷ್ಠಾನಾಧಿಕಾರಿಗಳಿಗೆ (Last Mile Functionaries - LMF) ಕಳುಹಿಸಲಾಗುತ್ತದೆ.

L1, L2 & L3 ಎಂದು    ತಂತ್ರಾಂಶದಲ್ಲಿ ಅಳವಡಿಸಲಾಗಿರುವ ಪ್ರತಿ ಹಂತದ ಅಧಿಕಾರಿಗಳು ದಾಖಲಾದ ದೂರುಗಳನ್ನು ಸವಿಸ್ತಾರವಾಗಿ ಪರಿಶೀಲಿಸಿ, ನಾಗರಿಕರ ಸಮಸ್ಯೆಯನ್ನು ಆಲಿಸಿ, ಕುಂದುಕೊರತೆಗಳನ್ನು ಸಾಧ್ಯವಾದಷ್ಟೂ ಸಮಾಧಾನಕರ ರೀತಿಯಲ್ಲಿ ನಿಗದಿತ ಅವಧಿಯೊಳಗಾಗಿ, ಅನ್ವಯವಾಗುವ ನಿಯಮಗಳಿಗನುಸಾರ ನಿವಾರಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯು ವೆಬ್ ಪೋರ್ಟಲ್‌ ಅಥವಾ ಮೊಬೈಲ್ ಅಪ್ಲಿಕೇಷನ್ (https://play.google.com/store/apps/details?id=com.csg.ipgrs)ನಲ್ಲಿ ಲಭ್ಯವಿದೆ ಹಾಗೂ ಅಂತರ್ಜಾಲ ಸಂಪರ್ಕವಿಲ್ಲದಿದ್ದರೂ ಸಹ ಸಾರ್ವಜನಿಕರು ಕಾಲ್ ಸೆಂಟರ್ ಸಹಾಯವಾಣಿ - 1902 ಗೆ ಕರೆ ಮಾಡಿ ತಮ್ಮ ದೂರನ್ನು ದಾಖಲಿಸಬಹುದಾಗಿದೆ. ದೂರು ಕೊಟ್ಟಂಥ ನಾಗರೀಕರಿಗೆ ಅವರ ದೂರಿನ ಹಂತದ ಬಗ್ಗೆ SMS ಕಳುಹಿಸಲಾಗುತ್ತದೆ.

ದೂರನ್ನು ನಿರ್ವಹಿಸುವ ಪ್ರಕ್ರಿಯೆಯಲ್ಲಿ “ಕೈಗೊಳ್ಳಲಾದ ಕ್ರಮಗಳ ವರದಿ” (Action Taken Report)ಯನ್ನು ಸಾರ್ವಜನಿಕರು ತಂತ್ರಾಂಶದಲ್ಲಿ ವೀಕ್ಷಿಸಲು ಅವಕಾಶವಿದೆ. ಸಾರ್ವಜನಿಕರ ಪ್ರತಿಕ್ರಿಯೆಯನ್ನೂ ಸಹ ಪಡೆಯಲಾಗುತ್ತದೆ. ತೃಪ್ತಿಕರವಾದ ನಿವಾರಣೆ ದೊರಕಲಿಲ್ಲವೆಂಬ ಪ್ರತಿಕ್ರಿಯೆ ಸಾರ್ವಜನಿಕರಿಂದ ಸ್ವೀಕರಿಸಿದಲ್ಲಿ, ದೂರನ್ನು ಮರುಪರಿಶೀಲನೆಗೆ ಮೇಲಾಧಿಕಾರಿಗೆ ಸ್ವಯಂಚಾಲಿತವಾಗಿ ಕಳುಹಿಸುವ ವ್ಯವಸ್ಥೆಯನ್ನು ಈ ತಂತ್ರಾಂಶದಲ್ಲಿ ಅಳವಡಿಸಲಾಗಿದೆ.